ಆತ್ಮೀಯ ಬಂಧುಗಳೇ
ಕುವೆಂಪು ವಿಶ್ವವಿದ್ಯಾಲಯವು ಬೋಧನೆ ಮತ್ತು ಸಂಶೋಧನೆಗಾಗಿರುವ ಒಂದು ಚೈತನ್ಯ ಶೀಲ ಮತ್ತು ಕ್ರಿಯಾಶೀಲ ವಿಶ್ವವಿದ್ಯಾಲಯವಾಗಿದ್ದು ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಸ್ಥಿತವಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಬೋಧಕ ವರ್ಗದವರ ಶ್ರೇಷ್ಠತೆ, ವಿದ್ವತ್, ಕ್ರಿಯಾಶೀಲ ಚಟುವಟಿಕೆಗಳು ಮತ್ತು ಅತ್ಯುತ್ತಮ ಸಂಶೋಧನೆಗಾಗಿ ತನ್ನ ಬದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಹೆಮ್ಮೆ ಎನಿಸುತ್ತದೆ. ವೈವಿಧ್ಯತೆ ಮತ್ತು ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಒಂದು ವಿಶಿಷ್ಟ ಮತ್ತು ಪ್ರೇರಣಾತ್ಮಕ ವಾತಾವರಣವನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ.. “ಎಲ್ಲರಿಗೂ ಪರಿಪೂರ್ಣ ಶಿಕ್ಷಣ” ಎಂಬ ಧ್ಯೇಯದೊಂದಿಗೆ 1987 ರಿಂದಲೂ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾಲಯವು ಒದಗಿಸುತ್ತಾ ಬಂದಿದೆ. ನಮ್ಮ ಮೌಲ್ಯಗಳು ಶೋಧನೆ, ಕ್ರಿಯಾಶೀಲತೆ, ಶ್ರೇಷ್ಠತೆ, ಪ್ರಾಮಾಣಿಕತೆ ಮತ್ತು ಮಾನವ ಸೇವೆಯ ಜೊತೆಗೆ ಸಮಾಜ ಕಲ್ಯಾಣದ ವಿಷಯಗಳಿಗೆ ಪರಿಹಾರ ಕಂಡುಕೊಳ್ಳುವುದು ಸಹ ಶಿಕ್ಷಣದ ಉದ್ದೇಶಗಳಲ್ಲಿ ಒಂದು ಎಂಬುದು ನಮ್ಮ ಧ್ಯೇಯೋದ್ದೇಶ. Read More