: 08282- 256301/256307 | Login

ಅಧಿಸೂಚನೆಗಳು view more

image description

ಸ್ವಾಗತ ಮತ್ತು ಶುಭಾಶಯಗಳು!

ಭಾರತೀಯ ಸಮಾಜವು ಕೃಷಿ ಆಧಾರಿತ ಸಮಾಜದಿಂದ ಜ್ಞಾನ ಆಧಾರಿತ ಸಮಾಜವಾಗಿ ಪರಿವರ್ತನೆ ಹೊಂದುತ್ತಿದ್ದು ಈಗ ಜಾಗತೀಕರಣಗೊಂಡ ಮಾಹಿತಿ ಸಮಾಜವಾಗಿ ವಿಶ್ವದಲ್ಲಿ ತನ್ನ ಗುರುತನ್ನು ಪಡೆಯುವ ಪ್ರಯತ್ನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನು ತೆರೆದಿಡುತ್ತಿರುವ ಈ ಪರ್ವದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಸಂಪನ್ಮೂಲಗಳೆಂದರೆ ಜ್ಞಾನ ಹಾಗೂ ಕೌಶಲ್ಯಗಳು. ದೇಶದ ಶಕ್ತಿಯು ಆ ದೇಶದ ಶಿಕ್ಷಿತ ಯುವಜನರನ್ನು ಅವಲಂಬಿಸಿರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ತನ್ನೆಲ್ಲ ಶಕ್ತಿಯನ್ನು ಹೂಡುವುದು ಒಂದು ದೇಶವು ಮಾಡಬಹುದಾದ ಅತ್ಯಂತ ಪ್ರಬುದ್ಧವಾದ ಹೂಡಿಕೆಯಾಗಿದೆ. ಯಾವುದೇ ವಿಶ್ವವಿದ್ಯಾಲಯದ ಎದುರಿಗೆ ಇರುವ ಸವಾಲೆಂದರೆ ವಿಶೇಷವಾದ ಜ್ಞಾನ, ಸಂವಹನೆ, ಸಂಶೋಧನೆ, ನಾಯಕತ್ವ ಹಾಗೂ ಹೊಸದನ್ನು ಸೃಷ್ಟಿಸುವ ಕೌಶಲ್ಯಗಳಿಗಾಗಿ ಮನ್ನಣೆ ಸಿಕ್ಕುವಂಥ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸನ್ನದ್ಧರಾಗುವಂತೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡಿ, ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಿ ದೇಶದ ಪ್ರಗತಿಗೆ ಸಹಾಯವಾಗುವುದಾಗಿದೆ.Read More

ಪ್ರೊ.ಬಿ ಪಿ ವೀರಭದ್ರಪ್ಪ ಕುಲಪತಿಗಳು

ಅಫಿಲಿಯೇಷನ್ಸ್ / ಪ್ರಮಾಣೀಕರಣಗಳು

ಸಹಯೋಗಗಳು

    

 

ವರದಿಗಳು